ವೀಲೆಂಡ್, ಹೆನ್ರಿಚ್ ಆಟ್ಟೊ
	1877-1957. ಜರ್ಮನಿಯ ರಸಾಯನ ವಿe್ಞÁನಿ. ಈತನ ಸಂಶೋಧನ ಕ್ಷೇತ್ರ ಪಿತ್ತಾಮ್ಲಗಳು. ತಂದೆಯೂ ರಸಾಯನವಿe್ಞÁನಿ ಆಗಿದ್ದುದು ಈತನಿಗೆ ಅದರಲ್ಲಿ ಅಭಿರುಚಿ ಹುಟ್ಟಲು ಕಾರಣ. ಮ್ಯೂನಿಚ್ ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ ಪಡೆದು ತನ್ನ ಜೀವಿತದ ಬಹುಕಾಲ ಅಲ್ಲೇ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ. ಪಿತ್ತಾಮ್ಲಗಳ ಅಣುರಚನೆ ಶೋಧಿಸಿದ್ದು ಇವನ ಪ್ರಮುಖ ಸಂಶೋಧನೆ. ಆಗ ಪರಿಚಿತವಾಗಿದ್ದ ಮೂರು ಪಿತ್ತಾಮ್ಲಗಳ ರಚನೆಗಳು ಸದೃಶವಾಗಿವೆ ಯೆಂದು ತೋರಿಸಿದ. ಅವು ಮೂಲತಃಕೊಲ್ಯಾನಿಕ್ ಆಮ್ಲದ ವ್ಯುತ್ಪನ್ನಗಳು. ಆ ಹಂದರದ ಒಳರಚನೆಯಲ್ಲಿ ಬೇರೆಬೇರೆ ಪರಮಾಣು ಗುಚ್ಛಗಳು ಸೇರಿಕೊಂಡು ವಿವಿಧ ಪಿತ್ತಾಮ್ಲಗಳಾಗಿವೆ ಎಂಬುದನ್ನು ನಿಸ್ಸಂಶಯವಾಗಿ ಪ್ರದರ್ಶಿಸಿದ. ಮುಂದಿನ ಅವನ ಸಂಶೋಧನೆ ಜೀವಕೋಶಗಳಲ್ಲಿ ಜರಗುವ ರಾಸಾಯನಿಕ ಕ್ರಿಯೆಗಳ ತನಿಖೆ. ಇವು ಉತ್ಕರ್ಷಣ ಕ್ರಿಯೆಗಳು; ಅಂದರೆ ಹೈಡ್ರೊಜನ್‍ನಿವಾರಣಾ ಕ್ರಿಯೆಗಳು, ಆಕ್ಸಿಜನ್ ಸಂಕಲನವಲ್ಲ. ಆದರೆ ಉಸಿರಾಟ ಪ್ರಕ್ರಿಯೆಗಳಲ್ಲಿ ಎರಡೂ ಬಗೆಯ ವಿದ್ಯಮಾನಗಳು ನಡೆಯಬಹುದು. ಪರಿಣಾಮವಾಗಿ ನಮ್ಮ ಆಹಾರದಲ್ಲಿರುವ ಸಂಕೀರ್ಣ ಆಗ್ರ್ಯಾನಿಕ್ ರಾಸಾಯನಿಕಗಳು ಅಂತಿಮವಾಗಿ ಕಾರ್ಬನ್ ಡೈಆಕ್ಸೈಡ್ ಮತ್ತು ನೀರುಗಳಾಗಿ ಪರಿವರ್ತಿ ಸಲ್ಪಟ್ಟು ಏಕಕಾಲದಲ್ಲಿ ನಮ್ಮ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಾದ ದೇಹಶಕ್ತಿಯನ್ನು ಒದಗಿಸುತ್ತವೆ. ಜೀವಸತ್ತ್ವ ಡಿ ಯಂತೆ ಲೈಂಗಿಕ ಹಾರ್ಮೋನುಗಳು ಸಹ ಸ್ಟೀರಾಯ್ಡ್‍ಗಳು ಅಥವಾ ಅವುಗಳ ಸಂಬಂಧಿಗಳು ಎಂದು ಪ್ರಚುರಪಡಿಸಿದ. ಸ್ಟೀರಾಯ್ಡ್ ರಸಾಯನವಿe್ಞÁನದ ಪ್ರವರ್ತಕನೆಂದು ಪ್ರಸಿದ್ಧನಾದ. 1927ರಲ್ಲಿ ಇವನಿಗೆ ನೊಬೆಲ್ ಪ್ರಶಸ್ತಿ ದೊರೆಯಿತು. ಈತ ಅಂದಿನ ರಾಜಕೀಯದಲ್ಲೂ ಭಾಗಿಯಾಗಿದ್ದ. ಎರಡನೆಯ ಮಹಾಯುದ್ಧದ ಕಾಲವದು. ನಾಜಿಗಳನ್ನು ವಿರೋಧಿಸಿದವರು ಜೀವಂತವಾಗಿರುತ್ತಿರಲಿಲ್ಲ. ಆದರೆ ಅವರ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದು, ಅನಂತರ ಹನ್ನೆರಡು ವರ್ಷಗಳ ಕಾಲ ಇವನು ಬದುಕಿ ಉಳಿದದ್ದು ಅಚ್ಚರಿ.	
										   (ಎಚ್.ಜಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ